ದಾವಣಗೆರೆ, ಮಾ.9- ಇಲ್ಲಿನ ಪಿ.ಬಿ. ರಸ್ತೆಯಲ್ಲಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜ ಸೇವೆಯಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ `ನಾರಿ ಶಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಲೇಬೆನ್ನೂರಿನ ನಾಹಿದಾ ಅಂಜುಂ, ಜೆಜೆಎಂ ಮೆಡಿಕಲ್ ಕಾಲೇಜಿನ ಡಾ. ಅನಿತಾ ರವಿ, ಬಾಪೂಜಿ ಆಸ್ಪತ್ರೆಯ ಡಾ. ಸುನೀತಾ ರವೀಂದ್ರ, ಹರಿಹರ ಶ್ರೇಯ ಆಸ್ಪತ್ರೆಯ ಡಾ. ರಶ್ಮಿ, ಸೇಂಟ್ ಪೀಟರ್ ಕಾನ್ವೆಂಟ್ ನ ವಾಣಿ ಕೇಶವ್, ಅಂಜುಮನ್ ಇಸ್ಲಾಮಿಯಾ ಶಾಲೆಯ ಜುಬೇದಾ ಬಾನು ಅವರುಗಳಿಗೆ `ನಾರಿ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ನ ವ್ಯವಸ್ಥಾಪಕ ಬಿಜು ಮ್ಯಾಥ್ಯೂ ಪ್ರಶಸ್ತಿ ಪ್ರದಾನ ಮಾಡಿದರು.
ಸುಲ್ತಾನ್ ಶಾಪಿಂಗ್ ಫೆಸ್ಟ್ ಲಕ್ಕಿ ಡ್ರಾ ವಿಜೇತ ಅಖಿಲ್ ಅಹಮದ್ ಕೆರೆಬಿಳಚಿ ಅವರಿಗೆ ಸ್ಕೂಟಿ ವಾಹನವನ್ನು ಮಲೇಬೆನ್ನೂರಿನ ಪುರಸಭೆಯ ನಾಹಿದಾ ಅಂಜುಂ ಹಸ್ತಾಂತರಿಸಿದರು.
ಮಾರುಕಟ್ಟೆ ವ್ಯವಸ್ಥಾಪಕ ಜೆ.ಎಂ. ಪ್ರಸಾದ್, ಆರ್.ಹೆಚ್. ಚೇತನ್, ಅಬ್ರಾರ್ ಅಹ್ಮದ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.