ದಾವಣಗೆರೆ, ಮಾ.9- ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಒತ್ತಾಯಿಸಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರು ಕಾರ್ಯ ಕಲಾಪಗಳನ್ನು ನಡೆಸುತ್ತಾ ಇಂದಿನಿಂದ ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಧರಣಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವ ರಾಜ್, ಉಪಾಧ್ಯಕ್ಷ ಬಿ.ಬಿ. ರಾಮಪ್ಪ, ಕಾರ್ಯದರ್ಶಿ ಎಲ್.ಹೆಚ್. ಪ್ರದೀಪ್, ಸಹ ಕಾರ್ಯದರ್ಶಿ ಜಿ.ಕೆ. ಬಸವರಾಜ್, ನಿಕಟ ಪೂರ್ವ ಅಧ್ಯಕ್ಷ ಎನ್.ಟಿ. ಮಂಜು ನಾಥ, ನಿಕಟ ಪೂರ್ವ ಉಪಾ ಧ್ಯಕ್ಷ ಹೆಚ್. ದಿವಾಕರ್, ವಕೀಲರಾದ ಎ.ಸಿ. ರಾಘವೇಂದ್ರ, ಪಿ.ವಿ. ಶಿವಕುಮಾರ್, ಕಂದಗಲ್ ಮಲ್ಲಿಕಾರ್ಜುನಪ್ಪ, ಮಂಜುಳ, ಭಾಗ್ಯಮ್ಮ ಸೇರಿದಂತೆ ಇತರೆ ವಕೀಲರು ಭಾಗವಹಿಸಿದ್ದಾರೆ.