ದಾವಣಗೆರೆ, ಮಾ. 9- ಶ್ರೀ ಶಾರದಾಂಬ ಮಹಿಳಾ ಸಂಘದಿಂದ ನಗರದ ಮೌನೇಶ್ವರ ಶಾಲೆಯ ವಿಶೇಷ ಮಕ್ಕಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಕ್ಕಳಿಗೆ ಸಿಹಿ ಹಂಚಿ, ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರೇಮ ಬಾಲರಾಜ್, ಸೌಮ್ಯ ಸತೀಶ್, ಮಧುಮತಿ ಗಿರೀಶ್, ನಾಗಶ್ರೀ ಗಿರೀಶ್, ಮೊನಿಷಾ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.