ಜಗಳೂರಿನಲ್ಲಿ ನಾಳೆ ಆರೋಗ್ಯ ಶಿಬಿರ

ಜಗಳೂರು, ಮಾ. 6- ಪಟ್ಟಣದ ನಿರ್ಮಲ ನರ್ಸಿಂಗ್ ಹೋಮ್‌ ಆವರಣದಲ್ಲಿ ನಾಳೆ ದಿನಾಂಕ 8ರ ಸೋಮವಾರ  ಉಚಿತ ಆರೋಗ್ಯ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಶಿಬಿರದ ಸದುಪ ಯೋಗ ಪಡೆದುಕೊಳ್ಳಲು  ನಿರ್ಮಲ ನರ್ಸಿಂಗ್ ಹೋಮ್‌ನ ಕಾರ್ಯನಿ ರ್ವಹಣಾ ನಿರ್ದೇಶಕ ಎಂ. ನಿಂಗಪ್ಪ ಮನವಿ ಮಾಡಿಕೊಂಡರು. ಪಟ್ಟ ಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಯ ಕೊರತೆಯಿಂದ ನೂರಾರು ಕಿ.ಮೀ. ತೆರಳಿ ಆರೋಗ್ಯ ಚಿಕಿತ್ಸೆ ಪಡೆಯುವಂತಾಗಿದೆ. ಬಡ ಜನರ ಅನುಕೂಲಕ್ಕಾಗಿ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು,  ಗುಣಮಟ್ಟದ ಉಪಕರಣಗಳು, ತಜ್ಞ ವೈದ್ಯರುಗಳಿಂದ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸಲು ನಿರ್ಧರಿಸಲಾಗಿದೆ. ಚಿಕಿತ್ಸೆ ಅಗತ್ಯವಿರುವವರನ್ನು ಶಿಬಿರದ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಜೆ.ಎನ್. ಶಿಲ್ಪ, ಡಾ. ರಾಜೀವ್ ಉಪಸ್ಥಿತರಿದ್ದರು.

error: Content is protected !!