ಬಿಇಎ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ರಸಪ್ರಶ್ನೆ ಕಾರ್ಯಕ್ರಮ

ದಾವಣಗೆರೆ, ಮಾ. 6- ನಗರದ ಬಿಇಎ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಕಾರ್ಯಕ್ರಮದಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಹಂಸ, ಜೆ. ವಸುಂಧರ ಸ್ವಾಗತಿಸಿದರು. ಸಂಜನಗೌಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಹತ್ವ ತಿಳಿಸಿದರು. ಪ್ರಾಂಶುಪಾಲ ಜೆ. ಪದ್ಮನಾಭ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು, ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಿದರು.

ಇಪ್ಪತ್ ಉಮೇರಾ ಖಾನಂ ನಿರೂಪಿಸಿದರು. ಜೋಯಾ ಕೌಸರ್ ವಂದಿಸಿದರು.

error: Content is protected !!