ಹರಪನಹಳ್ಳಿ, ಮಾ.7- ತಾಲ್ಲೂಕಿನ ಜೋಷಿ ಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವವನ್ನು ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಚ್. ಮಹಂತೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಶಾಲಾ ಮುಖ್ಯ ಶಿಕ್ಷಕ ಲಿಂಗರಾಜು, ಗ್ರಾ.ಪಂ.ಅಧ್ಯಕ್ಷ ಎಂ.ಆರ್. ಅನುಷ ಮಂಜುನಾಥ್, ಉಪಾಧ್ಯಕ್ಷೆ ಬಿ. ಮಂಜಮ್ಮ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಹಳೇಮನಿ ಲಕ್ಷ್ಮಣ, ಅಜ್ಜೋಳ್ ಹಾಲಪ್ಪ, ಕೆ. ದೇವೀರಮ್ಮ ಬಸವರಾಜ, ನಿವೃತ್ತ ಶಿಕ್ಷಕ ಬಿ. ಶಂಕರಚಾರಿ, ಎಚ್. ವಿಜಯಲಕ್ಷ್ಮಿ, ಸುಜಯ ಮಂಜುಳಾ, ಕೆ. ವೀರಪ್ಪ, ಬಿ. ಮಂಜುನಾಥಚಾರಿ ಇನ್ನಿತರರಿದ್ದರು.
January 7, 2025