ಮಲೇಬೆನ್ನೂರು ಪುರಸಭೆ ಪ್ರಭಾರ ಅಧ್ಯಕ್ಷರಾಗಿ ಅಂಜಿನಮ್ಮ

ಮಲೇಬೆನ್ನೂರು, ಮಾ.7- ಸ್ಥಳೀಯ ಪುರಸಭೆಯ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಅಂಜಿನಮ್ಮ ಆದಾಪುರ ವಿಜಯಕುಮಾರ್ ಇಂದು ಅಧಿಕಾರ ವಹಿಸಿಕೊಂಡರು.

ಪುರಸಭೆ ಅಧ್ಯಕ್ಷರಾಗಿದ್ದ ನಾಹೀದ ಅಂಜುಂ ಸೈಯದ್ ಇಸ್ರಾರ್ ಅವರು ರಾಜೀನಾಮೆ ನೀಡಿದ್ದು, ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬಿಜೆಪಿ-ಜೆಡಿಎಸ್ ಸದಸ್ಯರು ಹೊಂದಾಣಿಕೆ ಮಾಡಿಕೊಂಡು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ಹೊಂದಿದ್ದರು. ಒಪ್ಪಂದಂತೆ ಅಧ್ಯಕ್ಷ ಸ್ಥಾನವನ್ನು ಮೊದಲು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು.  ಇದೀಗ ಒಪ್ಪಂದದ ಪ್ರಕಾರ ಜೆಡಿಎಸ್‌ನ ನಾಹೀದ ಅಂಜುಂ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಳಿದ 2 ತಿಂಗಳ ಅವಧಿಗೆ ಬಿಜೆಪಿ ಸದಸ್ಯರು ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ. ಸುರೇಶ್, ಮಹಾಲಿಂಗಪ್ಪ, ಮಾಸಣಗಿ ಶೇಖರಪ್ಪ, ಅಧಿಕಾರಿಗಳಾದ ದಿನಕರ್, ಪ್ರಭು ಇನ್ನಿತರರು ಹಾಜರಿದ್ದರು.

error: Content is protected !!