ದಾವಣಗೆರೆ, ಜು.22- ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ – 19 ಪ್ರಯುಕ್ತ ಜವಳಿ ಕೈಗಾರಿಕಾ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಯೋಜಕ ಶ್ರೀನಿವಾಸ್ ಚಿನ್ನಿಕಟ್ಟಿ, ಕೋಮಲ್ ಜೈನ್, ಡಿ. ಶೇಷಾಚಲ, ರಘು, ಮಂಜುನಾಥ್ ನಾಯ್ಕ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಸುರೇಶ್ ತಡಕನಹಳ್ಳಿ, ಅಪ್ಪಾರೇಖಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾ ಖೆಯ ಡಾ. ನವ್ಯಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.