ದಾವಣಗೆರೆ, ಮಾ. 5 – ತ್ರಿಭಾಷಾ ಕವಿ ಪುಟ್ಟರಾಜ ಗವಾಯಿಗಳ 107 ನೇ ಜನ್ಮ ದಿನದ ಕಾರ್ಯಕ್ರಮವನ್ನು ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು .
ಹಿರಿಯ ಪತ್ರಕರ್ತರಾದ ಬಕ್ಕೇಶ್ ನಾಗನೂರು ಅವರು, ಪುಟ್ಟರಾಜ ಗವಾಯಿಗಳ ಜೀವನ ದರ್ಶನ ಮಾಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಶ್ರಮದ ಕಾರ್ಯದರ್ಶಿ ಎ.ಹೆಚ್ ಶಿವಮೂರ್ತಿಸ್ವಾಮಿ ಅವರು ವಹಿಸಿದ್ದರು. ಆರಂಭದಲ್ಲಿ ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಿತು, ಅಮರಯ್ಯನವರು ಸ್ವಾಗತಿಸಿ, ನಿರೂಪಿಸಿದರು. ವೇದಿಕೆಯಲ್ಲಿ ಆಶ್ರಮದ ಸಹ ಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.