ಹೊಳೆಸಿರಿಗೆರೆ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಲೇಬೆನ್ನೂರು, ಮಾ.2- ಹೊಳೆಸಿರಿಗೆರೆ ಗ್ರಾಮದಲ್ಲಿ ಅತಿವೃಷ್ಟಿ ಅನುದಾನ 39 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಮಂಗಳ ವಾರ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಎಸ್‌ಡಿಎಂಸಿ ಉಪಾಧ್ಯಕ್ಷ ಎನ್. ಪರಶುರಾಮಪ್ಪ, ಗ್ರಾ.ಪಂ. ಸದಸ್ಯರಾದ ಬಿ. ಶೇಖರಪ್ಪ, ಎ.ಕೆ. ವಿನಾಯಕ, ಭೋವಿ ಹಾಲೇಶಪ್ಪ, ಬಿ. ಪ್ರಭು, ಮುಖಂಡ ಶಿವಕುಮಾರ್, ಅಂಜಿನಪ್ಪ, ಪಿಡಿಒ ಜಯಕುಮಾರ್, ಪಿಡಬ್ಲ್ಯೂಡಿ ಇಂಜಿನಿಯರ್ ಬಿ.ಜಿ. ಶಿವಮೂರ್ತಪ್ಪ ಇನ್ನಿತರರು ಹಾಜರಿದ್ದರು.

error: Content is protected !!