ದಾವಣಗೆರೆ, ಮೇ 1- ದಾವಣಗೆರೆ-ಚಿತ್ರದುರ್ಗ ಬಂಟರ ಸಂಘದ ವತಿಯಿಂದ ಕೊರೊನಾ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಎನ್- 95ನ ಒಂದು ಸಾವಿರ ಮಾಸ್ಕ್ ಗಳನ್ನು ವಿತರಿಸಲಾಯಿತು.
ಕರಾವಳಿ ಕ್ರೆಡಿಟ್ ಕೋ ಆಪ್ ಸೊಸೈಟಿಯ ಅಧ್ಯಕ್ಷ ಉಮೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸಿತಾರ ಪ್ರಭಾಕರ್ ಶೆಟ್ಟಿ, ವೈಶಾಲಿ ಮಹೇಶ್ ಶೆಟ್ಟಿ, ಕಿರಣಕುಮಾರ್, ಸದಾಶಿವ ಶೆಟ್ಟಿ, ಬೇಲೂರು ಸಂತೋಷ ಕುಮಾರ್ ಶೆಟ್ಟಿ, ಅಜ್ಜಪ್ಪ ಪವಾರ್, ಅಂತುಗೋಪಿ ಉಪಸ್ಥಿತರಿದ್ದರು.