ದಾವಣಗೆರೆ, ಜು.22- ಸ್ಥಳೀಯ ಕೆಟಿಜೆ ನಗರದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ ಶೇ. 24.10 ರ ಅನುದಾನದಲ್ಲಿ ಅಂಗವಿಕರಿಗೆ ಹಾಗೂ ವೃದ್ಧರಿಗೋಸ್ಕರ ಲಿಫ್ಟ್ ಅಳವಡಿಸಲು ಮತ್ತು ನೆಲ ಅಂತಸ್ತಿಗೆ ಗ್ರಾನೈಟ್ ಮತ್ತು ಟೈಲ್ಸ್ ಅಳವಡಿಸಲು ಮಹಾಪೌರರಾದ ಎಸ್.ಟಿ. ವೀರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿಯೂ ಆದ ಕೆಪಿಸಿಸಿ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ, ಯುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಮತ್ತಿತರರು ಮೇಯರ್ ಅವರಿಗೆ ಮನವಿ ಸಲ್ಲಿಸಿದರು.