ದಾವಣಗೆರೆ, ಮಾ.4- ಕೆಟಿಜೆ ನಗರದ 10ನೇ ತಿರುವಿನಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನವನ್ನು ಪರಿಶಿಷ್ಟರ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸುತ್ತಿದ್ದು, ಸದರಿ ಭವನ ಪೂರ್ಣಗೊಳ್ಳಲು ಅಂದಾಜು 35 ಲಕ್ಷ ರೂ.ಗಳ ಅವಶ್ಯಕತೆ ಇದ್ದು, ಪಾಲಿಕೆಯ (ಶೇ.24.10) ಅನುದಾನದಲ್ಲಿ ಕೂಡಲೇ ಮಂಜೂರು ಮಾಡಿಕೊಡುವಂತೆ ಶ್ರೀ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ನವರು ಮೇಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸುಮಾರು 14 ವರ್ಷಗಳಿಂದ ಭವನ ಕುಂಟುತ್ತಾ ಸಾಗುತ್ತಿದ್ದು, ಅತಿಥಿಗಳಿಗೆ 2 ನೇ ಮಹಡಿಯಲ್ಲಿ ವಾಸಕ್ಕಾಗಿ ಕೊಠಡಿಗಳ ನಿರ್ಮಾಣದ ಅಗತ್ಯವಿದೆ. ಪಾಲಿಕೆಯು ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ. 24.10 ಅನುದಾನದಲ್ಲಿ ಹಣ ಮಂಜೂರು ಮಾಡಿದಲ್ಲಿ ಭವನ ಸಂಪೂರ್ಣಗೊಳ್ಳಲಿದೆ ಎಂದು ಮನವಿಯಲ್ಲಿ ಕೋರಲಾಗಿದೆ.