ಮಲೇಬೆನ್ನೂರು, ಮಾ.3- ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ನಾಳೆ ಗುರುವಾರ ಸಂಜೆ 4 ಗಂಟೆಗೆ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿವೆ. ಸಂಜೆ 5 ಗಂಟೆಗೆ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.