ದಾವಣಗೆರೆ, ಮಾ.3- ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗೆರೆ ಹಾಗೂ ಒಆರ್ಡಿಐ ಸಹಭಾಗಿತ್ವ ದಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ರೇಸ್ ಫಾರ್ ಸೆವೆನ್ ಜಾಥಾದಲ್ಲಿ ಸ್ವಯಂ ಪ್ರೇರಿತರಾಗಿ ಯುವಕರು ಭಾಗವಹಿಸಿ, ಜಾಗೃತಿ ಮೂಡಿಸಿದರು.
ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಮಾತನಾಡಿ, ವಿರಳ ರಕ್ತ ರೋಗಗಳ ಚಿಕಿತ್ಸೆ ಅತ್ಯಂತ ದುಬಾರಿಯಾಗಿರುವುದರಿಂದ ಸರ್ಕಾರದ ಪಾಲುದಾರಿಕೆ ಅತ್ಯಗತ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿರಳ ರಕ್ತ ರೋಗಿಗಳ ಕಷ್ಟಗಳನ್ನು ಅರಿತುಕೊಂಡು ಅವರಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಂಶೋಧನೆಗೆ ಅನುಕೂಲ ವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಹಿರೇಕೆರೂರು ಪ.ಪಂ. ಅಧ್ಯಕ್ಷ ಗುರುಶಾಂತ ಎತ್ತಿನ ಹಳ್ಳಿ, ಸದಸ್ಯರಾದ ಮಹೇಂದ್ರ ಬಡಳ್ಳಿ, ಅಲ್ತಾಫ್, ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಮೀರಾ ಹನಗವಾಡಿ, ಕಾರ್ಯನಿ ರ್ವಾಹಕ ಅಧಿಕಾರಿ ನವೀನ್ ಹವಳಿ, ಕಾರ್ಯನಿ ರ್ವಾಹಕ ನಿರ್ದೇಶಕ ಸದಾಶಿವಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಭಾಗವಹಿಸಿದ್ದರು. ಪೂಜಾ ಪಿ. ಹವಳಿ ಕಾರ್ಯಕ್ರಮ ನಿರೂಪಿಸಿದರು.