ಕೂಡ್ಲಿಗಿ, ಮಾ.3- ಚಿಕ್ಕಕೆರೆಯಾಗಳಹಳ್ಳಿ ಸಮೀಪ ಇರುವ ಶ್ರೀ ಬೇವಿನಹಳ್ಳಿ ದುರುಗಮ್ಮ ದೇವಿಯ ರಥೋತ್ಸವ ಇಂದು ಸಂಜೆ ನೆರವೇರಿತು. ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕಿನ ಅಪಾರ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದು, ಇಷ್ಟ ದೇವತೆಯ ದರುಶನ ಪಡೆದರು. ಸ್ಥಳೀಯ ಭಕ್ತರು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಳೀಯರು ಮಾತ್ರ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರೆದರು.
January 4, 2025