ಹೊನ್ನಾಳಿಯಲ್ಲಿ ಕರವೇ ಖಂಡನೆ
ಹೊನ್ನಾಳಿ, ಮಾ.3- ಪ.ಪಂ. ವ್ಯಾಪ್ತಿಯ ಜಾಗದಲ್ಲಿ ಅಕ್ರಮ ಕಟ್ಟಡ ಹಾಗೂ ಯುಜಿಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಕಾಮಗಾರಿ ನೆಪದಲ್ಲಿ ಸಿಸಿ ರಸ್ತೆ ಸಂಪೂರ್ಣ ಒಡೆದು ಹಾಳು ಮಾಡುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲವಾಗುತ್ತಿರುವುದನ್ನು ಖಂಡಿಸಿ, ಕ.ರ.ವೇ (ಪ್ರವೀಣ್ ಶೆಟ್ಟಿ ಬಣ) ಹಾಗೂ ಯುವಶಕ್ತಿ ಒಕ್ಕೂಟದಿಂದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ವಿ. ಪ್ರಸನ್ನ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಮಂಜು, ದಿವಾಕರ್, ಹರೀಶ್, ಯೋಗೇಶ್, ನೀಲಕಂಠ, ನಾಗರಾಜ ಇನ್ನಿತರರಿದ್ದರು.