ಹರಿಹರ, ಮಾ.3 – ನಗರದ ಶ್ರೇಯಾ ಆಸ್ಪತ್ರೆಯಲ್ಲಿ ಭಾನುವಾರ ಭಾರತೀಯ ವೈದ್ಯಕೀಯ ಸಂಘದ ಸಭೆ ಏರ್ಪಡಿಸಲಾಗಿತ್ತು. ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ವೆಂಕಟಾಚಲಪತಿ ಸಂಘದ ಸದಸ್ಯರ ನೋಂದಣಿ ಹೆಚ್ಚಳ, ವೈದ್ಯರಿಗೆ ದೊರಕುವ ಸಾಮಾಜಿಕ ಭದ್ರತೆ ಯೋಜನೆಗಳ ಕುರಿತು ಹಾಗೂ ಕೇಂದ್ರ ಸರ್ಕಾರ ತಂದಿರುವ ಸಮ್ಮಿಶ್ರ ವೈದ್ಯಕೀಯ ಪದ್ಧತಿಯಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು.
ಐಎಂಎ ಹರಿಹರ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಎ.ಗೋಪಿ ವಂದಿಸಿದರು. ಡಾ.ಖಮಿತ್ಕರ್, ಡಾ.ಸಚಿನ್ ಬೊಂಗಾಳೆ, ಡಾ.ಮಲ್ಲಿಕಾರ್ಜುನ, ಡಾ.ಶೈಲಜಾಕ್ಷಿ, ಡಾ.ರಶ್ಮಿ, ಡಾ.ಹರೀಶ್, ಡಾ.ಕವಿತಾ, ಡಾ.ಶಾರದಾದೇವಿ, ಡಾ.ಚಂದ್ರಿಕಾ, ಡಾ.ಪ್ರಕಾಶ್, ಡಾ.ಪ್ರವೀಣ್, ಡಾ.ಮೆಹರ್ವಾಡೆ ಉಪಸ್ಥಿತರಿದ್ದರು.