ಮಲೇಬೆನ್ನೂರು, ಮಾ.3- ಜಿ. ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಕ್ರಿಕೆಟರ್ ವತಿಯಿಂದ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಗ್ರಾಮೀಣ ಮಟ್ಟದ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಗ್ರಾಮ ಮುಖಂಡರಾದ ಬಿ.ಎಸ್. ನಂದಿಗೌಡ, ಹುಚ್ಚಣ್ಣರ ರಂಗನಾಥ್, ನಂದಿಬಸಪ್ಪ, ಕೆ.ಜಿ. ಶ್ರೀನಿವಾಸ್, ದಡ್ಡಿ ತಿಮ್ಮಣ್ಣ ಮತ್ತು ಜಿ.ಪಿ. ಹನುಮಗೌಡ, ಮಲೇಬೆನ್ನೂರು ಪುರಸಭೆ ಸದಸ್ಯ ಪಿ.ಆರ್. ರಾಜು ಹಾಗೂ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.