ದಾವಣಗೆರೆ, ಮಾ.1- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ಗ್ಯಾಸ್ ಸಬ್ಸಿಡಿ ರದ್ದು ಮಾಡಿರುವುದರ ವಿರುದ್ದ ಜನಸಾಮಾನ್ಯರಿಗೆ ಸಿಹಿ ಹಂಚಿ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಲಾಯಿತು.
ಆಮ್ ಆದ್ಮಿ ಪಕ್ಷದ ಆದಿಲ್ ಖಾನ್ ಎಸ್.ಕೆ., ಕರ್ನಾಟಕ ಸೋಷಿ ಯಲ್ ಸರ್ವೀಸ್ ಸಂಘಟನೆಯ ಮೊಹಮ್ಮದ್ ಹಯಾತ್, ಮೊಹಮ್ಮದ್ ಯೂನುಸ್, ಕರ್ನಾಟಕ ಜನ ಶಕ್ತಿ ಸಂಘಟನೆಯ ಸತೀಶ್ ಅರವಿಂದ್, ಅಣ್ಣಪ್ಪ, ಶಿವಕುಮಾರ್, ಅಲ್-ಹಾಶ್ಮಿ ಟ್ರಸ್ಟ್ ನ ವಾಸಿಮ್ ಖಾನ್, ಸಮಾಜ ಸೇವಕ ಅನೀಸ್ ಅಹಮದ್, ಹಜ್ರತ್ ಟಿಪ್ಪು ಸುಲ್ತಾನ್ ಟ್ರಸ್ಟ್‍ನ ಮಹಬೂಬ್ ಬಾಷಾ, ಸೈಯದ್ ಮುಬಾರಕ್ ಮತ್ತಿತರರು ಉಪಸ್ಥಿತರಿದ್ದರು ಎಂದು ಮಹಮ್ಮದ್ ಹಯಾತ್ ತಿಳಿಸಿದ್ದಾರೆ.