ಹರಿಹರ, ಫೆ.27- ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾಗಿ ವಿ.ಕೆ. ಹರೀಶ್ ನೇಮಕಗೊಂಡಿದ್ದಾರೆ.
ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಬಿ. ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮ್ಜದ್ ಅಲಿ, ಜಿಲ್ಲಾಧ್ಯಕ್ಷ ಬಾಬುರಾವ್, ದಾವಣಗೆರೆ ನಗರಾಧ್ಯಕ್ಷ ಶ್ರೀನಿವಾಸ್ ಇಂಡಿ ಹಾಗೂ ಚಂದ್ರಶೇಖರ್ ಗಣಪಾ ಉಪಸ್ಥಿತರಿದ್ದರು.