ದಾವಣಗೆರೆ, ಫೆ.27- ದಾವಣಗೆರೆ ವಿಶ್ವವಿದ್ಯಾನಿಲಯದ ವಲಯ ಹಾಗೂ ಅಂತರ್ ಕಾಲೇಜು ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಎ.ವಿ. ಕಮಲಮ್ಮ ಕಾಲೇಜು ಕ್ರೀಡಾಪಟುಗಳು ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ. ನಗರದ ಎಆರ್‌ಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಡಿ. ಭಾರತಿ, ಬಿ.ಸಿ. ರುಚಿತ, ಎಂ. ಸ್ನೇಹ, ಎಲ್. ಮಹಿಮಾ ಹಾಗೂ ಚಂದ್ರಿಕಾ ಸಿ. ಪಾಟೀಲ್ ಭಾಗವಹಿಸಿದ್ದು, ಪ್ರಥಮ ಸ್ಥಾನ ಪಡೆದಿದ್ದಾರೆ.
December 27, 2024