ಮಲೇಬೆನ್ನೂರು. ಫೆ 28 – ಗಾಯಗೊಂಡು ನರಾಳಾಡುತ್ತಿದ್ದ ಕೋತಿಯೊಂದನ್ನು ಕಂಡ ಶಿಕ್ಷಕ ಗಿರೀಶ್ ಗಂಟೇರ್ ಅವರು ತಕ್ಷಣ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಅಂಚೆ ಕಛೇರಿ ಇರುವ ಕಟ್ಟಡದ ಮೇಲೆ ಗಾಯಗೊಂಡು ಕುಳಿತಿದ್ದ ಕೋತಿಯನ್ನು ಗಮನಿಸಿದ ಶಿಕ್ಷಕ ಗಿರೀಶ್ ಅವರು ಅದಕ್ಕೆ ನೀರು ಆಹಾರ ನೀಡಿದ್ದಾರೆ.
ನಂತರ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಿಗೆ ವಿಷಯ ತಿಳಿಸಿದಾಗ ಅರಣ್ಯ ಇಲಾಖೆಯ ಮಾಲತೇಶ್, ಸದಾನಂದ್, ರಜಾಕ್ ಸಾಬ್ ಅವರು ಪುರಸಭೆಯ ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯ ನಿರೀಕ್ಷಕ ನವೀನ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿದ್ದ ಕೋತಿಯನ್ನು ಸುರಕ್ಷಿತವಾಗಿ ಹಿಡಿದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿ ಸಲಾಯಿತು. ಡಾ.ಬಿ.ಎಸ್. ತೇಲಗಾರ್ ಅವರು ಕೋತಿಯನ್ನು ಬೋನಿನಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.