ಹೂವಿನಹಡಗಲಿ, ಏ.24- ಪಟ್ಟಣದ ಶಾಸ್ತ್ರಿ ಸರ್ಕಲ್, ಅಂಬೇಡ್ಕರ್ ಸರ್ಕಲ್ ಬಳಿ ಇರುವ ವಿವಿಧ ಅಂಗಡಿಗಳಿಗೆ ಮಾಸ್ಕ್ ಧರಿಸದೇ ಭೇಟಿ ಕೊಟ್ಟ ಗ್ರಾಹಕರಿಗೆ ಸ್ಥಳೀಯ ಪೊಲೀಸರು ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ. 50 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇವರಿಂದ 5,000 ರೂ.ಗಳನ್ನು ವಸೂಲಿ ಮಾಡಲಾಗಿದೆ. ಸಿಪಿಐ ರಾಮರೆಡ್ಡಿ, ಪೇದೆಗಳಾದ ಕನ್ನೆಳ್ಳಿ ನಾಗರಾಜ್, ಹಣ್ಣಿ ನಾಗರಾಜ್, ಎಎಸ್‌ಐ ಒಡಕಪ್ಪ ಅವರುಗಳು ಪಾಲ್ಗೊಂಡಿದ್ದರು.
ಇದೇ ಗ್ರಾಹಕರು ಮತ್ತೊಮ್ಮೆ ಮಾಸ್ಕ್ ಧರಿಸದೇ ಅಂಗಡಿಗಳಿಗೆ ಭೇಟಿ ಕೊಟ್ಟರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಯಿತು.