ಗುಟೆನ್‌ ಬರ್ಗ್ ಜನ್ಮ ದಿನಾಚರಣೆ

ದಾವಣಗೆರೆ, ಫೆ.26- ಕರ್ನಾಟಕ ರಾಜ್ಯ ಅಸಂಘಟಿತ ಮುದ್ರಣ ಕಾರ್ಮಿಕರ ಸಂಘದಿಂದ ಮುದ್ರಣದ ಪಿತಾಮಹಾ ಜೋಹಾನ್ಸ್ ಗುಟೆನ್ ಬರ್ಗ್‌ ಅವರ 622 ನೇ ಜನ್ಮ ದಿನಾಚರಣೆಯನ್ನು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪತ್ರಕರ್ತ ಎ. ಫಕೃದ್ದೀನ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಎನ್. ರಾಜೇಂದ್ರ ಬಂಗೇರ ಮಾತನಾಡಿ ಬರ್ಗ್‌ ಅವರ ಜೀವನ-ಸಾಧನೆ ತಿಳಿಸಿದರು. ನಂತರ ಸಿಹಿ ವಿತರಿಸಲಾಯಿತು. ಸಂಘದ ಬಸವರಾಜ್ ಎಂ. ಮಣಿ, ಶಿವಣ್ಣ ಸಾಹುಕಾರ, ನಾಗರಾಜ್ ಇನ್ನಿತರರಿದ್ದರು.

error: Content is protected !!