ಹೊನ್ನಾಳಿ, ಫೆ.23 – ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ವಿ.ಶ್ರೀಧರ ಅಧ್ಯಕ್ಷತೆಯಲ್ಲಿ 2021-22ರ ಸಾಲಿನ ಉಳಿತಾಯ ಬಜೆಟ್ ಮಂಡನೆ ಸಭೆಯಲ್ಲಿ ಸಿ.ಎಂ. ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಜೆಟ್ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಪಟ್ಟಣದ ನೀರು ಸರಬರಾಜು ಕೇಂದ್ರದ ಅವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಜೆಟ್ ಮಂಡನೆ ಸಭೆಯ 10,48,243.ರೂಗಳ ಉಳಿತಾಯ ಬಜೆಟ್‍ನ್ನು ಮಂಡಿಸಿದರು.
ಪಂಚಾಯಿತಿಯು 11,66,12,563 ರೂ.ಗಳ ಆದಾಯ ನಿರೀಕ್ಷಿಸಲಾಗಿದ್ದು, ಅರಂಭಿಕ ಶುಲ್ಕು ರೂ. 1496943 ಸೇರಿ ಒಟ್ಟು 11,81,09,506 ರೂ.ಗಳಲ್ಲಿ ಒಟ್ಟು ಖರ್ಚು 11,70,61,263 ರೂ.ಗಳನ್ನು ಕಳೆದು 1048243 ರೂ.ಗಳ ಉಳಿತಾಯ ಬಜೆಟ್‍ನ್ನು ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಬಜೆಟ್ ಮಂಡಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ಆನಂದಪ್ಪ ಪ.ಪಂ. ಉಪಾಧ್ಯಕ್ಷೆ ರಂಜಿತ ಚನ್ನಪ್ಪ ವಡ್ಡಿ, ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಸಿಬ್ಬಂದಿಗಳು ಸ್ಲಂಬೋರ್ಡ್ ಅಧಿಕಾರಿ ಕಪನಿಗೌಡ, ನಿರ್ದೇಶಕರಾದ ಗೀತಾ ರವೀಂದ್ರ ಮುಂತಾದವರು ಇದ್ದರು.