ಮಲೇಬೆನ್ನೂರು, ಫೆ.23 – ಇಲ್ಲಿನ ಹೆಸರಾಂತ ರಥ ಶಿಲ್ಪಿಗಳಾದ ಕೆ. ಕೇಶವಚಾರ್ ಮತ್ತು ಇವರ ನಾಲ್ವರು ಸೋದರರನ್ನು ಭದ್ರವತಿ ತಾಲ್ಲೂಕಿನ ಗುಡುಮಘಟ್ಟ ಗ್ರಾಮದಲ್ಲಿ ನಡೆದ ನೂತನ ರಥ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನಿಸಿ ಗೌರವಿಸಿದರು.
ಗುಡುಮಘಟ್ಟ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಶ್ರೀ ಈಶ್ವರ ಸ್ವಾಮಿ ನೂತನ ರಥವನ್ನು 35 ಅಡಿ ಎತ್ತರದಲ್ಲಿ ಕೇವಲ 6 ತಿಂಗಳಲ್ಲಿ ಸಂಪೂರ್ಣವಾಗಿ ಕಟ್ಟಿಗೆಯಲ್ಲೇ ಬಹಳ ಸುಂದರವಾಗಿ ನಿರ್ಮಿಸಿರುವ ಬಗ್ಗೆ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮ್ಮ ಶಿಕಾರಿಪುರ ತಾಲ್ಲೂಕಿನಲ್ಲೂ ರಥ ನಿರ್ಮಾಣದ ಕೆಲಸವಿದ್ದು ಅದರ ಜವಾಬ್ದಾರಿ ನಿಮಗೆ ವಹಿಸುವುದಾಗಿ ಕೇಶವಚಾರಿ ಅವರಿಗೆ ಯಡಿಯೂರಪ್ಪ ಹೇಳಿದ್ದಾರೆ.
ಕೇಶವಚಾರ್, ಪ್ರಕಾಶ್‍ಚಾರ್ ಅವರು ಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಮಲೇಬೆನ್ನೂರಿನಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಮಣ್ಣಿನಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.