ದಾವಣಗೆರೆ, ಏ. 23- ನಗರ ಪಾಲಿಕೆ 1ನೇ ವಾರ್ಡಿನ ಮಹಾನಗರ ಪಾಲಿಕೆ ವತಿಯಿಂದ 2020-21ನೇ ಸಾಲಿನಲ್ಲಿ 15ನೇ ಹಣಕಾಸು ಅನುದಾನದಡಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹಮ್ಮಿಕೊಂಡಿರುವ ದೊಡ್ಡಬೂದಿಹಾಳ್ ಸರ್ವೇ ನಂಬರ್ 112ರ ಹಿಂದೂ ರುದ್ರಭೂಮಿ ಜಾಗಕ್ಕೆ ಕಾಂಪೌಂಡ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷನಾಯಕ ಎ. ನಾಗರಾಜ್, ವಾರ್ಡ್ ಸದಸ್ಯ ಜಿ.ಡಿ. ಪ್ರಕಾಶ್ ಮಹಾನಗರ ಪಾಲಿಕೆ ಅಧಿಕಾರಿ/ನೌಕರ ವರ್ಗದವರು ಉಪಸ್ಥಿತರಿದ್ದರು.
January 23, 2025