ರಾಣೇಬೆನ್ನೂರಿನಲ್ಲಿ ಕವಿಗೋಷ್ಠಿ

ರಾಣೇಬೆನ್ನೂರು, ಫೆ.22- ಹಾವೇರಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ವಿಷಯಾಧಾರಿತ ಜಿಲ್ಲಾ ಹಂತದ ಕವಿಗೋಷ್ಠಿಯನ್ನು ಸ್ಥಳೀಯ ನಾಗಶಾಂತಿ ಉನ್ನತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕವಿಗೋಷ್ಠಿ ಅಧ್ಯಕ್ಷತೆಯನ್ನು ಉಮಾದೇವಿ ಐರಣಿ ವಹಿಸಿದ್ದರು. ಸಾಹಿತಿ ಹಾಗೂ ರಂಗಕರ್ಮಿ ವೆಂಕಟೇಶ್ ಈಡಿಗರ ಮಾತನಾಡಿದರು.  ಕಾರ್ಯಕ್ರಮ ಆಯೋಜಕ ಸಾಹಿತಿ ಚಂದ್ರಪ್ಪ ಬಾರಂಗಿ ಮಾತನಾಡಿದರು. 

ಕವಿಗೋಷ್ಠಿ ಸಂಚಾಲಕ ಪ್ರಭಾಕರ ಎನ್. ಶಿಗ್ಲಿ ನಿರೂಪಿಸಿದರು. ಗೋಷ್ಠಿಯಲ್ಲಿ ಸುಮಂಗಲ ಹೊಸಳ್ಳಿ, ಮಾರುತಿ ನಾಯ್ಕ, ಆರ್.ಕೆ. ಹುಬ್ಬಳ್ಳಿ, ಸಂತೋಷ್ ಪಿಸೆ, ಗೀತಾ ಚಿನ್ನಿಕಟ್ಟಿ, ಅರುಣಕುಮಾರ ಮ ನರಗುಂದ, ಚಂದ್ರಪ್ಪ ಬಾರಂಗಿ, ಪ್ರಭಾಕರ್ ಎನ್. ಶಿಗ್ಲಿ, ಮಾರುತಿ ಕೊರವರ, ಎಸ್.ವಿ. ಹಿರೇಮಠ, ಲಲಿತಾ ಮರೆಕ್ಕನವರ, ಮಂಜುಳಾ ಹಿರೇಬಿದರಿ, ಪಾರ್ವತಿ ಎನ್. ಕಾಶೀಕರ, ಚನ್ನಬಸಪ್ಪ ನಾಡರ, ವೆಂಕಟೇಶ್‌ ಈಡಿಗರ, ಮಹೇಶ ದೇವಗಿರಿಮಠ, ಉಮಾದೇವಿ ಐರಣಿ,  ಮೈಲಾರ ಸಾವಿತ್ರಿಬಾಯಿ, ಶ್ಯಾಮಲಾ ಜಿ. ಕುಲಕರ್ಣಿ ಹಾಗೂ ಬಸಮ್ಮ ಹೆಗ್ಗನಗೌಡ್ರು ಇನ್ನಿತರರಿದ್ದರು.

ತೀರ್ಪುಗಾರರಾಗಿ ಹಾವೇರಿ ಹಿರಿಯ ಸಾಹಿತಿ ಶಿಕ್ಷಣ ತಜ್ಞ ಪ್ರಕಾಶ ಮನ್ನಂಗಿ ಭಾಗವಹಿಸಿದ್ದರು. ಸೌಜನ್ಯ ಹೊಸಳ್ಳಿ ಪ್ರಾರ್ಥಿಸಿದರು. ಮಾರುತಿ ನಾಯ್ಕ ವಂದಿಸಿದರು.

error: Content is protected !!