ದಾವಣಗೆರೆ, ಏ.21- ನಗರದಲ್ಲಿಂದು ಸಾರ್ವಜ ನಿಕವಾಗಿಯೂ ಶ್ರೀರಾಮ ನವಮಿ ಆಚರಿಸಲಾಯಿತು.
ಕಾಂಗ್ರೆಸ್ ನಿಂದ ಆಚರಣೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರೀರಾಮ ನವಮಿಯನ್ನು ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮುಖಂಡರಾದ ಪೇಪರ್ ಚಂದ್ರಣ್ಣ, ಅಜ್ಜಪ್ಪ ಪವಾರ್, ಬೆಳ್ಳೂಡಿ ಮಂಜುನಾಥ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಎಸ್. ರವಿ, ಶ್ರೀಕಾಂತ್ ಬಗರೆ, ಗೋಪಾಲ್, ಪಂಚಪ್ಪ ತೆರದಾಳ್, ಅಜಿತ್ ಆಲೂರು, ಸತೀಶ್ ಶೆಟ್ಟಿ ಸೇರಿದಂತೆ ಇತರರು ಇದ್ದರು.
ಬಿಜೆಪಿ ಕಾರ್ಯಾಲಯ: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಸಾಂಕೇತಿಕ ವಾಗಿ ಸಾಮಾಜಿಕ ಅಂತರದೊಂದಿಗೆ ಶ್ರೀರಾಮ ನವಮಿ ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್, ಶ್ರೀನಿವಾಸ್ ದಾಸಕರಿಯಪ್ಪ, ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ಲಿಂಗರಾಜ್ ಗೌಳಿ, ಜಿಲ್ಲಾ ಮಾಧ್ಯಮ ಸಂಚಾಲಕ ಹೆಚ್.ಪಿ. ವಿಶ್ವಾಸ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಮಹೇಶ್, ಪ್ರಧಾನ ಕಾರ್ಯದರ್ಶಿ ಪುಷ್ಪ ವಾಲಿ, ಪಾಲಿಕೆಯ ಸದಸ್ಯ ಬಿ.ಜಿ. ಅಜಯಕುಮಾರ್, ಪ್ರಸನ್ನಕುಮಾರ್, ಆರ್. ಶಿವಾನಂದ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಹನುಮಂತನಾಯ್ಕ ಸೇರಿದಂತೆ ಇತರರು ಇದ್ದರು.
ಭಗೀರಥ ಸರ್ಕಲ್: ನಿಟ್ಟುವಳ್ಳಿಯ ಭಗೀರಥ ಸರ್ಕಲ್ನಲ್ಲಿ ಶ್ರೀ ರಾಮನವಮಿಯನ್ನು ಟಿಟಿಡಿ ಸರ್ವ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಕೆ.ಎಂ. ಶ್ರೀನಿವಾಸ್, ಬಾಬು ರಾವ್, ಭಾಗ್ಯ ಶ್ರೀನಿವಾಸ್, ಮಾರುತಿ, ಹುಬ್ಬಳ್ಳಿ ವೆಂಕಟರಮಣ, ವಾರ್ತಾ ಇಲಾಖೆಯ ಬಿ.ಎಸ್.ಬಸವರಾಜ್, ಗೋವಾದ ಶ್ರೀನಿವಾಸ್, ಸುರೇಶ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.