ಹಡಗಲಿ, ಫೆ.22- ಜಿ.ಬಿ.ಆರ್. ಮಹಾವಿದ್ಯಾಲಯಕ್ಕೆ ತ್ರಿಮೂರ್ತಿ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ, ಗ್ರಾಮೀಣ ಭಾಗದ ಕಾಲೇಜಾದರೂ ಅಪರಿಮಿತ ಸಾಧನೆ ಮಾಡುವಲ್ಲಿ ಸಫಲವಾಗಿದೆ ಎಂದು ಮೆಚ್ಚುಗೆ ಸೂಚಿಸಿದೆ ಎಂದು ಪ್ರಾಂಶುಪಾಲ ಪ್ರೊ. ಎಸ್.ಎಸ್. ಪಾಟೀಲ್ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮಿತಿಯಲ್ಲಿ ಡಾ. ರಾಜನ್ ಮಧುಕರ ನಿನಿತಾ ವಿ.ವಿ. ಉತ್ತರಪ್ರದೇಶ, ರೆಹಿಮಾನ್ ಷರೀಫ್ ಅಖ್ತರ್ ಬೇಗಂ ಕ್ವೀನ್ಸ್ ಮೇರಿ ಕಾಲೇಜು ಚೆನ್ನೈ ಹಾಗೂ ಡಾ. ಮಧೇಂದ್ರಕುಮಾರ್ ಇದ್ದರು. ಕಾಲೇಜಿಗೆ ಬಿ ಪ್ಲಸ್ ಗ್ರೇಡ್ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
January 12, 2025