ದಾವಣಗೆರೆ, ಫೆ.21- ಗ್ರಂಥ ಸರಸ್ವತಿ ಪ್ರತಿಭಾ ರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ವಿದ್ಯಾನಗರದ ಉದ್ಯಾನವನದ ಕಾವ್ಯ ಮಂಟಪದಲ್ಲಿ ಏರ್ಪಾಡಾಗಿದ್ದ `ಕನ್ನಡಕಬ್ಬ ಉಗಾದಿಹಬ್ಬ-129′ ಕಾರ್ಯಕ್ರಮದ ಸಂದರ್ಭದಲ್ಲಿ ರಂಗಚೇತನ ಕಲಾಸಂಘದಿಂದ `ತವರು ಮನೆ’ ನಾಟಕ ಪ್ರದರ್ಶನಗೊಂಡಿತು. ಮಾರುತೇಶ್ ಮಾಂಡ್ರೆ ಅವರ ರಚನೆಯ ಈ ನಾಟಕವನ್ನು ಹಿರಿಯ ರಂಗಭೂಮಿ ಕಲಾವಿದ ಕೆ.ವೀರಯ್ಯಸ್ವಾಮಿ ಅವರು ನಿರ್ದೇಶಿಸಿ, ನಾಟಕದಲ್ಲಿ ಪ್ರಮುಖ ಪಾತ್ರ ಅಭಿನಯಿಸಿದರು.
December 27, 2024