ದಾವಣಗೆರೆ, ಏ.9- `ಕೋವಿಡ್-19′ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಆದೇಶಿಸಿರುವ ಲಾಕ್‌ಡೌನ್‌ನ 9ನೇ ದಿನದಂದು ಕೆಟಿಜೆ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಹಾಗೂ ದಾವಣಗೆರೆ ಫೈರ್ ಆಫೀಸ್ ಸಿಬ್ಬಂದಿಗಳಿಗೆ, ನಗರದ ನಿರಾಶ್ರಿತರಿಗೆ ಊಟ, ನೀರು ಹಾಗೂ ಮಜ್ಜಿಗೆ ವ್ಯವಸ್ಥೆಯನ್ನು ಹಿಂದೂ ಜಾಗರಣ ವೇದಿಕೆ ವತಿಯಿಂದ ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀನಿವಾಸ್ ಇವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಉಪಮೇಯರ್ ಸೌಮ್ಯ ನರೇಂದ್ರ, ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
February 24, 2025