ದಾವಣಗೆರೆ, ಏ.11- ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದಲೇ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು ಸಿ.ಜಿ. ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕವಾಗಿ ವಿತರಿಸಲಾಯಿತು.
ಕೊರೊನಾ ವೈರಸ್ ನಿಂದ ದೂರ ಉಳಿಯಲು ಮಾಸ್ಕ್ ಧರಿಸಿ ಆರೋಗ್ಯ ರಕ್ಷಿಸಿಕೊಳ್ಳುವಂತೆಯೂ ಮಾಸ್ಕ್ ವಿತರಿಸುತ್ತಾ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮೋರ್ಚಾದ ಅಧ್ಯಕ್ಷೆ ಮಂಜುಳ ಮಹೇಶ, ಮಾಜಿ ಜಿಲ್ಲಾ ಕಾರ್ಯದರ್ಶಿ ಭಾಗ್ಯಮ್ಮ, ಪುಷ್ಪ ವಾಲಿ ಇದ್ದರು.
January 24, 2025