ದಾವಣಗೆರೆ, ಏ.3- ಹೋಟೆಲ್ ಉದ್ದಿಮೆದಾರರ ಸಂಘವು ಸಾಮಾಜಿಕ ಬದ್ಧತೆಯಿಂದ ಶಾಮನೂರು ವಿದ್ಯಾಸಂಸ್ಥೆ ಇವರ ಸಹಯೋಗದೊಂದಿಗೆ ದಾವಣಗೆರೆಯ ಬಡ ಆಟೋರಿಕ್ಷಾ ಚಾಲಕರಿಗೆ, ಮನೆಗೆಲಸದ ಮಹಿಳೆಯರಿಗೆ ಮತ್ತು ಚಲನಚಿತ್ರ ಮಂದಿರದ ದಿನಗೂಲಿ ಕಾರ್ಮಿಕರಿಗೆ ಅವಶ್ಯ ದಿನಸಿ ಪದಾರ್ಥಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪೂಜ್ಯ ಮಹಾಪೌರ ಅಜಯ್ ಕುಮಾರ್, ಸಂಸ್ಥೆಯ ಅಧ್ಯಕ್ಷ ಮೋತಿ ಪರಮೇಶ್ವರ್, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಖಜಾಂಚಿ ಸೋಮಶೇಖರಯ್ಯ, ಜತೆ ಕಾರ್ಯದರ್ಶಿ ಮಂಜುನಾಥ ಬುದ್ಯ ಮತ್ತಿತರರು ಹಾಜರಿದ್ದರು.
ಒಂದು ಕಿಟ್ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಎಣ್ಣೆ, ಕಾರದಪುಡಿ, ರಸಂ ಪುಡಿ, ಉಪ್ಪು ಹಾಗೂ ಚಹಾ ಪುಡಿಗಳನ್ನು ಒಳಗೊಂಡಿತ್ತು ಎಂದು ದಾವಣಗೆರೆ ಹೋಟೆಲ್ ಉದ್ದಿಮೆದಾರ ಸಂಘದ ಕಾರ್ಯದರ್ಶಿ ಬಿ.ಕೆ. ಸುಬ್ರಮಣ್ಯ ತಿಳಿಸಿದ್ದಾರೆ.
January 23, 2025