ದಾವಣಗೆರೆ, ಏ.24- ಲಾಕ್‌ಡೌನ್ ಪರಿಣಾಮ ದುಡಿಮೆಯಿಲ್ಲದೇ, ಜೀವನ ಸಂಕಷ್ಟಮಯವಾಗಿರುವವರ ರಕ್ಷಣೆಗೆ ಮಾಜಿ ಸೈನಿಕರು ನಿಂತಿದ್ದು, ಬಿಎಸ್‌ಎಫ್‌ನ ಮಾಜಿ ಸೈನಿಕರು ಜೊತೆಗೂಡಿ ನಗರದ ಪ್ರತಿಯೊಂದು ಏರಿಯಾಗಳಲ್ಲೂ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದಾರೆ.
ನಿಟುವಳ್ಳಿ, ಕೆಟಿಜೆ ನಗರ, ಗೋಶಾಲೆ, ರಾಮನಗರಗಳಲ್ಲಿ ಬಡವರಿಗೆ ಕಿಟ್ ವಿತರಿಸಿ ಜನರ ಬದುಕಿಗೆ ಆಸರೆಯಾಗಿದ್ದಾರೆ. ಇದುವರೆಗೂ 1,800ಕ್ಕೂ ಅಧಿಕ ಕಿಟ್ ವಿತರಣೆ ಮಾಡಿದ್ದಾರೆ. ಮಾಜಿ ಸೈನಿಕರ ಈ ಮಾನವೀಯ ಕಳಕಳಿ ಕಾರ್ಯಕ್ಕೆ ಬಾಬಾ ರಾಮ್‌ದೇವ್ ಟ್ರಸ್ಟ್ ಸಾಥ್ ನೀಡಿದೆ.
January 13, 2025