ಆಹಾರ ಕಿಟ್ ವಿತರಣೆಗೆ ಶಾಸಕ ಎಸ್ಸೆಸ್ ಚಾಲನೆ

ದಾವಣಗೆರೆ, ಏ. 24- ಸಂಕಷ್ಟದಲ್ಲಿರುವ ನಾಗರಿಕರಿಗೆ ಅಕ್ಕಿ, ಸಕ್ಕರೆ, ಅವಲಕ್ಕಿ, ಕಡ್ಲೆಬೇಳೆ, ರವೆ, ಬೇಳೆ, ಗೋಧಿ ಹಿಟ್ಟು, ಸೋಪು, ಖಾರದ ಪುಡಿ, ಸಾಂಬಾರ್ ಪಾಕೆಟ್‍ಗಳ ಆಹಾರ ಸಾಮಗ್ರಿಗಳ ಕಿಟ್‍ನ್ನು ವಿತರಿಸಲು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ 21ನೇ ವಾರ್ಡ್ ಅಣ್ಣಾ ನಗರದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಜಿಲ್ಲಾಡಳಿತದಿಂದ ತಯಾರಿಸಿರುವ ಈ ಆಹಾರ ಸಾಮಗ್ರಿಗಳ ಕಿಟ್ ಒಂದು ಕುಟುಂಬಕ್ಕೆ 10-15 ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳಿದ್ದು, ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ, ಗೋಧಿ ಜೊತೆ ಈ ಕಿಟ್ ನೀಡಿದ್ದರಿಂದ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ಮಹಾನಗರ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ.ಎಂ.ಕೊಟ್ರಯ್ಯ, ವೆಂಕಟೇಶನಾಯ್ಕ, ಆನೆಕೊಂಡ ನಾಗರಾಜ್, ಉದ್ಯಮಿ ರವಿರಾಜ್ ಇಳಂಗೋವನ್ ಮತ್ತಿತರರಿದ್ದರು.

error: Content is protected !!