ದಾವಣಗೆರೆ, ಏ.24- ದೇಶಾದ್ಯಂತ ಲಾಕ್‌ಡೌನ್ ಆಗಿದ್ದು, ಬಡ ಕುಟುಂಬದವರು ತಮ್ಮ ದೈನಂದಿನ ಜೀವನವನ್ನು ನಡೆಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ವಾರ್ಡ್ ನಂ.10ರ ನಗರಪಾಲಿಕೆ ಸದಸ್ಯ ರಾಕೇಶ್ ಯಶವಂತರಾವ್ ಜಾಧವ್ ಪಾತಾಳ ಲಿಂಗೇಶ್ವರ ದೇವಸ್ಥಾನದ ಜೀಜಾಮಾತಾ ಶಾಲೆಯಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ್, ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ರಾವ್ ಮಾನೆ, ದಕ್ಷಿಣ ಅಧ್ಯಕ್ಷ ಆನಂದರಾವ್ ಶಿಂಧೆ, ಗೋವಿಂದ ರಾಜ್, ವಾರ್ಡ್ ಅಧ್ಯಕ್ಷ ಮಾಲತೇಶ್, ಕುಮಾರ್, ಎಂ.ಎನ್. ವೇಣು, ಪರಶುರಾಮ, ಪ್ರವೀಣ್ ಜಾಧವ್, ಶಾಮನೂರು ವಿಜಯ, ನವೀನ, ರಾಮಚಂದ್ರಪ್ಪ, ಶಂಕರ್ ಇನ್ನಿತರರು ಹಾಜರಿದ್ದರು.
January 12, 2025