ದಾವಣಗೆರೆ, ಏ.21- ನಗರದ ಜೈನ್ ಸಮಾಜದ ರಾಹುಲ್ ಜೈನ್ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಗಂಗಾಮತ ಸಮಾಜದ ಕಚೇರಿಯಲ್ಲಿ ಬಡವರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಆಚರಿಸಿಕೊಂಡರು.
ಸುಮಾರು 80 ಕಿಟ್‌ಗಳನ್ನು ರಾಹುಲ್ ಜೈನ್ ಹಾಗೂ ಪತ್ನಿ ಸಿಮ್ರಾನ್ ಜೈನ್ ವಿತರಿಸಿದರು. ಈ ಸಂದರ್ಭದಲ್ಲಿ ತಂದೆ ದಿಲೀಪ್ ಕುಮಾರ್ ಜೈನ್ ಹಾಗೂ ಸಂಪತ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಸಮಾಜದಿಂದ ಕಿಟ್ ವಿತರಿಸುವ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಕರೆಲ್ಲರಿಗೂ ಬೆಣ್ಣೆ ದೋಸೆ ಹಾಗೂ ಸ್ವೀಟ್‌ನ ವ್ಯವಸ್ಥೆ ಮಾಡಲಾಗಿತ್ತು.
ಸಮಾಜದ ವತಿಯಿಂದ ನಿಟುವಳ್ಳಿ, ಯರಗುಂಟೆ, ಶಿರಮಗೊಂಡನಹಳ್ಳಿ, ಎಸ್.ಆರ್. ಬಡಾವಣೆ, ಆನೆಕೊಂಡ, ನೂರಡಿ ರಸ್ತೆ, ಹಳೇಪೇಟೆ ಸೇರಿದಂತೆ, ನಗರದ ವಿವಿಧೆಡೆಗಳಲ್ಲಿ ಸಮಾಜದ ಕುಟುಂಬಗಳಿಗೆ 600ಕ್ಕೂ ಹೆಚ್ಚು ಆಹಾರ ಸಾಮಗ್ರಿ ಕಿಟ್‌ಗಳನ್ನು ನೀಡಲಾಯಿತು ಎಂದು ಸಂಘದ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾಗಾನಹಳ್ಳಿ ತಿಳಿಸಿದ್ದಾರೆ.
January 12, 2025