ದಾವಣಗೆರೆ, ಜು.10- ಜಿಲ್ಲಾಡಳಿತದ ಸಹಕಾರದೊಂದಿಗೆ ನಗರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಲಯನ್ಸ್ ಅಧ್ಯಕ್ಷ ಓಂಕಾರಪ್ಪ ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಸದಸ್ಯರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾಂತೇಶ್ ಒಣರೊಟ್ಟಿ ಅವರು ನೀರಿನ ವ್ಯವಸ್ಥೆ, ವೈ.ಬಿ.ಸತೀಶ್ ಅಕ್ಕಿಯನ್ನು, ಐವರು ಸುಶ್ರೂಷಕಿಯರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಜಿ ಕಣವಿ ನಟರಾಜ್, ಜಂಟಿ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್, ವಿನಯ್ ಜೋಗಪ್ಪ, ವೈ.ಬಿ. ಸತೀಶ್, ದೇವರಮನೆ ನಾಗರಾಜ್, ಸಜ್ಜನ್ ನಾಗರಾಜ್, ಜಗದೀಶ್, ಚೇತನ ಒಣರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು.
January 12, 2025