ದಾವಣಗೆರೆ, ಫೆ.21- ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಅಂಗರ ಚನಾ ಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ನಡ ವಳಿಕೆ ಹಾಗೂ ಕರ್ತವ್ಯ ನಿಷ್ಠೆ ಕುರಿತಂತೆ ‘ದೇಹ ದಾನ ಪ್ರತಿಜ್ಞಾ ವಿಧಿ’ ಬೋಧಿಸಲಾಯಿತು. ಈ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳಲ್ಲಿ ದೇಹದಾನದ ಪ್ರಾಮುಖ್ಯತೆ ಮತ್ತು ವೈದ್ಯ ಶಿಕ್ಷಣದಲ್ಲಿ ದೇಹದಾನದ ಔಚಿತ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್, ಅಂಗರಚನಾ ಶಾಸ್ತ್ರದ ಮುಖ್ಯಸ್ಥ ಡಾ. ಎ.ವಿ. ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
December 28, 2024