ಹರಪನಹಳ್ಳಿ, ಫೆ.17- ತಾಲ್ಲೂಕಿನ ಅರಸನಾಳು ಗ್ರಾಮದ ಜೆಕ್ಕಮ್ಮನವರ ಹನುಮಂತ ರೆಡ್ಡಿ ಹಲವು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡ ಕಲಾವಿದರಾಗಿದ್ದಾರೆ.
ಇವರು ಮೂಲತಃ ಹರಪನಹಳ್ಳಿ ತಾಲ್ಲೂಕಿನ ಅರಸನಾಳು ಗ್ರಾಮದ ಜೆಕ್ಕಮ್ಮನ ವರ ಸೀತಮ್ಮ ಪಕ್ಕೀರೆಡ್ಡಿ ಇವರ ಮಗನಾಗಿ ಜನಿಸಿ ಹಲವು ಕಲಾ ಪ್ರಕಾರಗಳನ್ನು ಮೈಗೂ ಡಿಸಿಕೊಂಡಿದ್ದು, ಎಲೆಮರೆ ಕಾಯಿಯಂತೆ ಬದುಕುತ್ತಿದ್ದಾರೆ. ಜಾನಪದ ಕಲಾವಿದರಾಗಿ, ರಂಗ ಕಲಾವಿದರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.