ದಾವಣಗೆರೆ, ಏ. 19- ನಗರದ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗ ಮತ್ತು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಾವಣಗೆರೆ ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಟ್ರೈನಿಂಗ್ ಪ್ರೋಗ್ರಾಂ ಅನ್ನು ಇದೇ ದಿನಾಂಕ 17 ರಿಂದ ಮೇ 2ರವರೆಗೆ ನಡೆಯಲಿದ್ದು, ಕಾರ್ಯಾಗಾರದಲ್ಲಿ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸುಧಾಕರ ಹೊಸಹಳ್ಳಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೌಶಲ್ಯಾಭಿವೃಧ್ಧಿ ತರಬೇತಿ ವಿಭಾಗದ ಸಂಯೋಜನಾಧಿಕಾರಿ ಜಿ.ಎಸ್. ಲೋಕೇಶ್ ಮತ್ತು ರವಿ ಉಪಸ್ಥಿತರಿದ್ದರು.
ಐಎಸ್‍ಇ ವಿಭಾಗದ ಮುಖ್ಯಸ್ಥರು ಹಾಗು ಕಾರ್ಯಕ್ರಮದ ಸಂಚಾಲಕ ಡಾ|| ಬಿ.ಎಸ್. ಸುನಿಲ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ|| ವೈ ವಿಜಯ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್‍ಚಂದ್ರ, ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕು. ಕಾವ್ಯ ಹೆಗಡೆ ಸ್ವಾಗತ ಗೀತೆ ಹಾಡಿದರು. ಪ್ರೊ|| ಫಿರೋಜ್ ಖಾನ್ ಮುಖ್ಯ ಅತಿಥಿಗಳ ಪರಿಚಯ ಹಾಗೂ ವಂದನಾರ್ಪಣೆ ನೆರವೇರಿಸಿದರು.