ಹಡಗಲಿ, ಫೆ. 16- ಪಟ್ಟಣದ ಗ್ರಾಮ ದೇವತೆ ಜಾತ್ರೆಯನ್ನು ಮೇ ತಿಂಗಳಲ್ಲಿ ಕೈಗೊಳ್ಳಲು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ಅಧ್ಯಕ್ಷ ಕೆ. ಮುದುಕಪ್ಪ ಮಾತನಾಡಿ, ಜಾತ್ರೆಯು ಮೇ 12 ರಿಂದ 26ರವರೆಗೆ ನಡೆಯಲಿದ್ದು, ಪ್ರಮುಖವಾಗಿ 18, 19 ಹಾಗೂ 20ರಂದು ಜಾತ್ರೆಯ ಪ್ರಮುಖ ಘಟ್ಟ ತಲುಪುತ್ತದೆ. ಅಂದು ರಥೋತ್ಸವವೂ ಜರುಗಲಿದ್ದು, 12ರಂದು ಉಕ್ಕಡ (ಗಡಿ) ಕಾಯುವುದರೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು ಎಂದರು. ಪುರಸಭೆ ಅಧ್ಯಕ್ಷ ವರದರಾಜ್ ಮೋದಿನ್ ಮತ್ತಿತರರು ಪಾಲ್ಗೊಂಡಿದ್ದರು.
April 1, 2025