ಕೂಡ್ಲಿಗಿ, ಏ.19- ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ( ಎಐಎಂಡಿಎಫ್) ವತಿಯಿಂದ ಇಂದು ಕೂಡ್ಲಿಗಿಯಲ್ಲಿ ಸುಮಾರು 5,000 ಮಾಸ್ಕ್ ಹಾಗೂ ಕೊರೊನಾ ಕಿಟ್ ಸಾಮಗ್ರಿಗಳನ್ನು ನಗರದ ಸಂತೆ ಮೈದಾನ, ಕೆಎಸ್‌ಆರ್‌ಟಿಸಿ ಬಸ್ಟ್ಯಾಂಡ್, ಮುಖ್ಯ ರಸ್ತೆ ಹಾಗೂ ಎಲ್ಲಾ ಮಸೀದಿಗಳಲ್ಲಿ ಉಚಿತವಾಗಿ ಹಂಚಿಕೆ ಮಾಡಲಾಯಿತು.
ಸ್ಥಾಪಕ ರಾಷ್ಟ್ರಾಧ್ಯಕ್ಷ ಶಕೀಲ್ ಹಸನ್, ರಾಜ್ಯ ಅಧ್ಯಕ್ಷ ಕನ್ನಡ ನಜೀರ್ ಆದೇಶದ ಮೇರೆಗೆ ಕಾರ್ಯಕ್ರಮ ಮಾಡಲಾಯಿತು. ಜಿಲ್ಲಾಧ್ಯಕ್ಷ ಇಸ್ಮಾಯಿಲ್ (ಮುನ್ನ) ಮಾತನಾಡಿ, ಕೊರೊನಾ ಜಾಗೃತಿ ಮೂಡಿಸಿದರು.
ಸಂಘಟನಾ ಕಾರ್ಯದರ್ಶಿ ಸೈಯದ್ ಶುಕೂರ್, ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಮಾಜ್, ತಾಲ್ಲೂಕು ಅಧ್ಯಕ್ಷ ಡಾ. ಷರೀಫ್, ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ಖಾಸಿಂ, ಯುವ ಘಟಕದ ಅಧ್ಯಕ್ಷ ಮನ್ನು, ಜಿಲ್ಲಾ ಸಂಚಾಲಕ ಅಬ್ದುಲ್ ಮಲಿಕ್, ಚಾಂದ್ ಬಾಷಾ, ಮೌಲಾ, ವಾಸಿಂ, ವರಿಸ್ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.