ದಾವಣಗೆರೆ, ಫೆ.15- ಮಹಾನಗರ ಪಾಲಿಕೆಯ 15ನೇ ವಾರ್ಡಿನ ಶಂಕರ ವಿಹಾರ ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಪಾರ್ಕ್ ಮತ್ತು ಉದ್ಯಾನವನ ಮತ್ತು ಶ್ರೀ ಸಿದ್ಧಿವಿನಾಯಕ ದೇವಸ್ಥಾನಗಳನ್ನು ಪಾಲಿಕೆ ವತಿಯಿಂದ ಅಭಿವೃದ್ಧಿಗೊಳಿಸಬೇಕೆಂದು ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಎಂ. ಮಹೇಶ್ವರಯ್ಯ, ಬಿ.ಜಿ. ಚಂದ್ರಶೇಖರಪ್ಪ, ಜಿ.ಎಸ್. ಚಂದ್ರಪ್ಪ, ವೆಂಕಟೇಶಪ್ಪ, ಟಿ. ರಾಕೇಶ್ ಹಾದಿಮನಿ ಮರಿಗೌಡ್ರು, ಶ್ರೀಧರ್, ಮೋತಿ ನಾಯಕ್ ಶಿವಕುಮಾರ್ ಮತ್ತು ಇತರೆ ಪದಾಧಿಕಾರಿ ಗಳು ಪಾಲಿಕೆ ಸದಸ್ಯರಾದ ಡಿ.ಎಸ್. ಆಶಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ವೀರಯ್ಯಸ್ವಾಮಿ, ಆಶಾ ಅವರ ಅವರ ಪತಿ ಉಮೇಶ್, ಸಂಗೀತ ಮಾಸ್ಟರ್ ಕಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.