ದಾವಣಗೆರೆ, ಫೆ.12- ನಗರದ ಡಿಸಿಎಂ ಕಾಟನ್ ಮಿಲ್ ಬಳಿ ಕೆಳ ಸೇತುವೆ ನಿರ್ಮಿಸಿ ರುವ ಸಂಸದರು ಸುಮಾರು 12 ಕೋಟಿ ರೂ.ಗಳಷ್ಟು ನಷ್ಟ ಉಂಟು ಮಾಡಿದ್ದಾರೆ.
ನಷ್ಟದ ಹಣವನ್ನು ಸಂಸದರು ತಮ್ಮ ಸ್ವಂತ ಹಣದಿಂದ ಕೇಂದ್ರದ ಬೊಕ್ಕಸಕ್ಕೆ ಜಮಾ ಮಾಡು ವಂತೆ ನೈರುತ್ಯ ರೈಲ್ವೇ ವಲಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಪ್ರಸ್ತುತ ನಿರ್ಮಾಣವಾಗುತ್ತಿ ರುವ ಸೇತುವೆ ನೇರ ವಾಗಿ ಸರಳ ರೇಖೆಯಲ್ಲಿದ್ದು, ಉತ್ತಮ ತಾಂತ್ರಿಕ ಜ್ಞಾನವುಳ್ಳ ಇಂಜಿನಿಯ ರ್‌ಗಳನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ. ನೀರು ನಿಲ್ಲದಂತೆ ಚರಂಡಿ ನಿರ್ಮಿಸುವಂತೆ ಅವರು ಕಿವಿಮಾತು ಹೇಳಿದ್ದಾರೆ.