ದಾವಣಗೆರೆ, ಫೆ.13- ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗೆ ಬಾಪೂಜಿ ಕಾಲೇಜಿನಲ್ಲಿ ಇಂದು ಕಾರ್ಯಾಗಾರವನ್ನು ನಡೆಸಲಾ ಯಿತು. ಬ್ಯಾಂಕಿನ ಅಧ್ಯಕ್ಷ ಜೆ.ಎಸ್.ವೇಣುಗೋಪಾಲ್ ರೆಡ್ಡಿ, ಉಪಾಧ್ಯಕ್ಷ ಶೇಖರಪ್ಪ ಅವರುಗಳು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ನಿರ್ದೇಶಕರಾದ ಜಗದೀಶ್ ಬಣಕಾರ, ಕೆ.ಹೆಚ್. ಷಣ್ಮುಖಪ್ಪ, ಕೆ.ಹೆಚ್.ಪಾಲಾಕ್ಷಪ್ಪ, ಟಿ.ಜೀವನ್ ಪ್ರಕಾಶ್, ಬ್ಯಾಂಕಿನ ಸಿಇಒ ಲಕ್ಷ್ಮಣ್, ಪ್ರಧಾನ ವ್ಯವಸ್ಥಾಪಕ ತಾವರೆನಾಯ್ಕ್, ನೌಕರರ ಸಂಘದ ಅಧ್ಯಕ್ಷ ಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
April 9, 2025