ರಾಣೇಬೆನ್ನೂರು, ಫೆ.14- ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮರಣಾರ್ಥ ಇಲ್ಲಿನ ಕಾಂಗ್ರೆಸ್ ಪಕ್ಷವು ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಬಸ್ ನಿಲ್ದಾಣದ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ನಗರಸಭೆ ಸದಸ್ಯರಾದ ಶಶಿ ಬಸೇನಾಯ್ಕರ, ಲಿಂಗರಾಜ ಕೋಡಿಹಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಮುಖಂಡರಾದ ಡಾ. ಆರ್.ಎಂ. ಕುಬೇರಪ್ಪ, ಚಂದ್ರಪ್ಪ ಬೇಡರ, ಬಸವರಾಜ ಹುಚ್ಚಗೊಂಡರ, ಬೀರಪ್ಪ ಲಮಾಣಿ, ಸೀತಾರಾಮರೆಡ್ಡಿ, ವೀರನಗೌಡ ಪೊಲೀಸ್ಗೌಡ್ರ, ಶೇರು ಕಾಬೂಲಿ, ಮಂಜುನಾಥ ದುಗ್ಗತ್ತಿ, ರಾಜು ಪಿಸೆ, ಎಸ್.ಜೆ. ಸುರಳಿಕೇರಿಮಠ, ಸುರೇಶ್ ಜಾಡಮಾಲಿ, ಕೃಷ್ಣಪ್ಪ ಕಂಬಳಿ, ಬಸವರಾಜ ಕಂಬಳಿ ಮತ್ತಿತರರಿದ್ದರು.
March 1, 2025