ಟಾಯ್ಕಾಥಾನ್-2021 : ಜಿ.ಎಂ.ಐ.ಟಿ ಪ್ರಾಜೆಕ್ಟ್ ಆಯ್ಕೆ

ದಾವಣಗೆರೆ, ಫೆ. 14- ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು  ಆಯೋಜಿಸಿರುವ ರಾಷ್ಟ್ರಮಟ್ಟದ ಟಾಯ್ಕಾ ಥಾನ್ – 2021 ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಗರದ  ಜಿ.ಎಂ. ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳ ತಂಡಗಳು ಮೊದಲನೇಯ ಸುತ್ತಿನಲ್ಲಿ ಆಯ್ಕೆಯಾಗಿರುತ್ತಾರೆ.

 ಸಿರಿ ಆರ್ ಮತ್ತು ತಂಡ ಹಾಗೂ ಸಾಗರ್ ಪಾಟೀಲ್ ಮತ್ತು ತಂಡ ಸಹಾಯಕ ಪ್ರಾಧ್ಯಾಪಕಿಯಾದ ಅಕ್ಷತಾ ಚೌಹಾಣ್, ಅಕ್ಷಯ್ ಶೇಟ್ ಮತ್ತು ತಂಡ  ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ಜೆ. ಪವನ್, ವಿ. ಪ್ರಣವ್ ಮತ್ತು ತಂಡ  ಸಹಾಯಕ ಪ್ರಾಧ್ಯಾಪಕ ಡಾ. ಜಿ.ಎಚ್. ಪೂಜಾರ್ ಇವರುಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿರುತ್ತಾರೆ. 

error: Content is protected !!